Saturday, April 21, 2012

ಮಾತ್ಗವಿತೆ-71

ನಿನ್ನ ಬೆತ್ತಲೆ ತೊಡೆಯ ಮೇಲೆ
ಎಷ್ಟೊಂದು ನೆತ್ತರು !
ಅತ್ತು ಬಿಡು ಒಮ್ಮೆ
ಆದ ಅವಮಾನ-ಆಘಾತಗಳ ಮರೆಯುವಂತೆ !
ಮೋಸದಾಟದಲಿ ಬಲಿ ಬಲಿ ಮಾಡಿದವರ
ಕ್ಷಮಿಸಿ ಬಿಡು !
ಯಾಕೆಂದರೆ ನೀನು ಸುಯೋಧನ !

2 comments:

  1. ದೈಹಿಕ ಹೊಡೆತಗಳ ನೆತ್ರರದಾಟದಿಂದ ಕಂಗಾಲಾಗಬೇಡ
    ನೆತ್ರರು ಹರಿದಷ್ಟು ನಿನ್ನಲ್ಲಿಯ ವೀರತ್ವ ಕಮ್ಮಿಯಾಗಲಾರದು
    ಜೀವನವೆಂಬ ರಣರಂಗದಲ್ಲಿ ಅವಮಾನ-ಆಘಾತಗಳು ಸಹಜ
    ವೀರನಾದವನು ಅವೆಲ್ಲವನ್ನೂ ಜೈಸಬೇಕೆ ಹೊರತು ಹೇರಿಕೊಳ್ಳಬಾರದಲ್ಲವೇ?
    ಕ್ಷಮಿಸಬೇಡ ಯಾರನ್ನು...ಯಾವುದನ್ನೂ...ಮೆಟ್ಟಿ ನಿಲ್ಲು
    ವೀರನಿಗೆ ಯೋಗ್ಯವಾದುದನ್ನು ಅನುಸರಿಸುವ ಛಲಗಾರನಾಗು
    ಯಾಕಂದರೆ ನೀನು ಛಲವಾದಿ...ಹಟವಾದಿ...ಇತಿಹಾಸ ಪುರುಷ!!!
    Hipparagi Siddaram

    ReplyDelete
    Replies
    1. ಛಲವಾದಿಗೆ ಬಲವೂ ಇದೆ ಬುದ್ಧಿಯೂ ಇದೆ. ಇಲ್ಲದಿದ್ದರೆ ಇನ್ನೂ ಕಲ್ಲಾಗಬೇಕಿತ್ತು ! ಸಾಯುವ ಕೊನೆಯ ಗಳಿಗೆವರಿಗೂ ಧರ್ಮವನ್ನೇ ಪಠಿಸಿ ಮೋಸಕ್ಕೆ ಬಲಿಯಾದ ಛಲವಾದಿ ಸುಯೋಧನ ಆಗ ದೇಹ ಕಳೆದುಕೊಂಡಿರಬಹುದು ; ಇಂದು ಸಾವಿರಾರು ದೇಹಗಳೊಂದಿಗೆ ಮತ್ತೇ ಬಂದಿದ್ದಾನೆ ಎಂಬುದನ್ನು ಯಾಕೋ ಜನ ಮರೆಯುತ್ತಿದ್ದಾರೆ ಎನಿಸುವುದಿಲ್ಲವೆ ಸಿದ್ಧರಾಮಜೀ ?

      Delete

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.