Thursday, July 05, 2012

ವಚನ-21

ಕಾಣುವ, ಕೇಳುವ ಕ್ರಿಯೆಗಳೆಲ್ಲ
ಪ್ರಮಾಣೀಭೂತ ಸತ್ಯವಲ್ಲ !
ಓಡುವ, ಕೂಡುವ ಸುಖಗಳೆಲ್ಲ ನಿಧಿಗಳಲ್ಲ !
ಮಾರುವ, ಹಾರುವ ಸರಕುಗಳೆಲ್ಲ
ಬತ್ತದ ಬದುಕಿಗೆ ನೆರವಾಗುವುದಿಲ್ಲ !
ನಿಜ ಸಂಗದ, ಅಜ-ಗಜವಿಲ್ಲದ ಮೈತ್ರಿಯ ಮುಂದೆ
ಬೇರೇನೂ ಕಾಣದು ಕಾರಣಿಕ ಸಿದ್ಧರಾಮ
ನಿಜದ ಅರಿತೊಡೆ ಆತಂಕವಿಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.