Thursday, July 19, 2012

ಮಾತ್ಗವಿತೆ-93

ಕ್ಷಣಭಂಗುರವೆಂದರಿತರೂ
ಪ್ರತಿಕ್ಷಣದ ಹುಡುಕಾಟಕ್ಕೆ ಯಾಕೆ ಬಲಿಯಾಗಬೇಕು ?
ಗುಣಮಧುರನೆಂದು ತಿಳಿದರೂ
ಸಮ್ಮೀಳನದ ಸುಖಕ್ಕೆ ಯಾಕೆ ಎರವಾಗಬೇಕು ?
ಬಯಸಿದರೆ ಬರಬಹುದು ; ದಹಿಸಿದರೂ ಕೂಡ !
ದಶದಿಕ್ಕುಗಳ ಅರಿವಿಲ್ಲದ, ಕುರುಹಿಲ್ಲದ
ಕರ್ಮಣ್ಯವಾದಿಕಾರಸ್ತು ... ಎಂದು ಹಾಡಿದರೆ
ಸಂಬಂಧಗಳ ಸಂಕೀರ್ಣತೆಯಾದರೂ ಯಾಕೆ ಬೇಕಿತ್ತು ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.