Sunday, July 15, 2012

ಮಾತ್ಗವಿತೆ-92

ನೋಡು ನೋಡುತ್ತಲೇ ಮುಗಿಲು ಮುಟ್ಟುವ
ಉಮೇದಿನಲ್ಲಿ ನೆಲವೂ ನೆಲೆಯಾಗದ ಬದುಕು !
ನೋವ ದಾಟಿ ನಲಿವು ಕಾಣಿಸಿಕೊಳ್ಳಬೇಕಾದ ಕಾಲದಲ್ಲಿ
ಹಳೆಯ ಗಾಯ ಮತ್ತೊಮ್ಮೆ ರಕ್ತ ಒಸರುತ್ತದೆ !
ಕಾಲಕ್ಕೆ ಕಾಯಬೇಕು ನಿಜ ;
ಕಾಯುವುದೇ ಕಾಯಕವಾದರೆ ಮಾಡುವುದೇನು ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.