Thursday, June 07, 2012

ಮಾತ್ಗವಿತೆ-80

ಪ್ರತಿದಿನವೂ ಪ್ರತಿಕ್ಷಣವೂ
ಹೇಳುತ್ತಲೇ ಇರಬೇಕು ;
ಕೇಳುವರಿಲ್ಲೆಂದು ಕಳವಳಗೊಳ್ಳದೇ
ಹಾಡ ಹಕ್ಕಿಯ ಪಾಡು ಹೇಳಬೇಕಲ್ಲವೆ ?
ನಿನ್ನೊಂದು ಹೇಳಿಕೆಗೆ ತಪಿಸುವ ;
ಪರಿತಪಿಸುವ ಪರ ಆತ್ಮವೊಂದಕ್ಕೆ
ಪ್ರತ್ಯೀಕರಿಸಿದರೂ ಪ್ರತಿಕ್ರಿಯೆ ಬೇಕಲ್ಲವೆ ?
ಹಾಗಾಗಿ
ಪ್ರತಿದಿನವೂ ಪ್ರತಿಕ್ಷಣವೂ
ಹೇಳುತ್ತಲೇ ಇರಬೇಕು  !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.