Thursday, January 16, 2014

ಮರಾಠಿ ದಲಿತ ಕವಿ ; ಸಂಘಟಕ ನಾಮದೇವ ಢಸಾಳರಿಗೆ ಶ್ರದ್ಧಾಂಜಲಿ

ಪದ್ಮಶ್ರೀ ನಾಮದೇವ ಢಸಾಳ

ಡಾ. ಸಿದ್ರಾಮ ಕಾರಣಿಕ
ಮರಾಠಿಯ ಬಹುದೊಡ್ಡ ದಲಿತ ಬರಹಗಾರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಾಮದೇವ ಢಸಾಳರು ನಿನ್ನೆ (15-01-2014) ಬಾಂಬೆ ಆಸ್ಪತ್ರೆಯಲ್ಲಿ ತೀರಿಕೊಂಡರು. ಮಹಾರಾಷ್ಟ್ರದ ಪುಣೆ ಸಮೀಪದ ಒಂದು ಹಳ್ಳಿಯಲ್ಲಿ 15-02-1949 ರಲ್ಲಿ ಜನಿಸಿದ ನಾಮದೇವರು ಆನಂತರ ತಮ್ಮ ತಂದೆಯೊಂದಿಗೆ ಮುಂಬಾಯಿಗೆ ಬಂದರು. ಅಲ್ಲಿ ಗೋಲಪೀಠಾ ಎನ್ನುವ ರೆಡ್ ಲೈಟ್ ಪ್ರದೇಶದ ಜೋಪಡಿಯಲ್ಲಿ ಬೆಳೆದರು. ಕೇವಲ ಮ್ಯಾಟ್ರಿಕ್ (ಎಸ್.ಎಸ್.ಎಲ್.ಸಿ) ವರೆಗೆ ಮಾತ್ರ ಶಿಕ್ಷಣ ಪಡೆದ ಅವರು ತಮ್ಮ ಹರಿತವಾದ ಲೇಖನಿಯ ಮೂಲಕ ಮರಾಠಿ ದಲಿತ ಸಾಹಿತ್ಯ ಸಂವೇದನೆಯನ್ನು ತೀವ್ರವಾಗಿ ಹಿಡಿದಿಟ್ಟವರು. ಕೆಲವು ಕಾಲ ಮುಂಬಾಯಿಯಲ್ಲಿ ಟ್ಯಾಕ್ಸಿ ಚಾಲಕರಾಗಿ ದುಡಿದ ಅವರು ಆನಂತರದಲ್ಲಿ ಅಂಬೇಡ್ಕರ್ ಚಳುವಳಿಯಲ್ಲಿ ಗುರುತಿಸಿಕೊಂಡು, ಅಮೇರಿಕೆಯ 'ಬ್ಯಾಕ್ ಪ್ಯಾಂಥರ್' ಪ್ರೇರಣೆಯಿಂದ ಮಹಾರಾಷ್ಟ್ರದಲ್ಲಿ 'ದಲಿತ ಪ್ಯಾಂಥರ್' ಹುಟ್ಟು ಹಾಕಿದರು. ಕಾಲಾನಂತರದಲ್ಲಿ ಆ 'ಪ್ಯಾಂಥರ್' ಕೂಡ ಹೋಳಾಯಿತು. ಒಂದು ಗುಂಪಿಗೆ ಇವರೇ ನಾಯಕರಾಗಿದ್ದರು. ಕೆಲವು ಕಾಲಗಳಿಂದ ಮಾಯಸ್ಥೇನಿಯಾ ಗ್ರ್ಯಾವೀಸ್ ಎನ್ನುವ ಕ್ಯಾನ್ಸರ್ ರೋಗ ಅವರನ್ನು ಬಾಧಿಸುತ್ತಿತ್ತು. ಆದರೂ ಕ್ರಿಯಾಶೀಲರಾಗಿದ್ದರು.
ಬುಧವಾರ (15-01-2014) ನಸುಕಿನ ನಾಲ್ಕು ಗಂಟೆ ಸುಮಾರಿಗೆ ತೀರಿಕೊಂಡ ನಾಮದೇವ ಢಸಾಳರನ್ನು ಇಂದು (16-01-2014) ಚೈತ್ಯಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.
ನಾಮದೇವ ಢಸಾಳರ ಸಾವು ದಲಿತ ಹೋರಾಟಕ್ಕೆ, ಬಂಡಾಯದ ಕೆಚ್ಚಿಗೆ ಮತ್ತು ಬಂಡಾಯ ಸಾಹಿತ್ಯಕ್ಕೆ ತುಂಬಲಾರದ ಹಾನಿ. ಅವರ ಪ್ರೇರಣೆ ಸದಾ ನಮ್ಮ ಮೇಲೆ ಇರಲಿ. ಅವರಿಗೆ ಗೌರವದ ವಂದನೆ.

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.