Wednesday, September 25, 2013

ಮಾತ್ಗವಿತೆ-150

ನನಗೆ ನಿನ್ನ ಮೇಲಿನ ಪ್ರೀತಿ ಬರೀ
ಮನಸ್ಸಿನದೋ ದೇಹದ್ದೋ
ನನಗೇ ಗೊತ್ತಿಲ್ಲ ;
ಯಾಕೆಂದರೆ ಹಗಲಿನಲ್ಲೂ ನೀನೇ ಕಾಣುತ್ತಿ
ಕತ್ತಲ, ಸರಿಹೊತ್ತಿನಲ್ಲೂ ನೀನೇ ಕಾಣುತ್ತಿ !
ನಿನ್ನ ಸುಂದರತೆ ನನ್ನ ಕಂಗಡಿಸಿಲ್ಲ ;
ಕ್ಷಣದ ಭಂಗುರತೆಯೂ ಇದಲ್ಲ !
ನಿನ್ನ ರೂಪ-ರುಪಾಯಿಗಳೂ ನಾ ಕಾಣೆ
ನೀನು ನನಗೆ ಬೇಕು ಎನ್ನುವುದಷ್ಟೇ ಗೊತ್ತು !
ಹೊತ್ತಲ್ಲದ ಹೊತ್ತಿನಲ್ಲಿ ನೀನು
ಸುತ್ತುವರಿಯುತ್ತಿಯಾ ; ಬತ್ತಳಿಕೆಯ ತಡವುತ್ತಿಯಾ
ಬಾಣ ಬಿಡಲೋ ಕಾಣದಂತೆ ಮರೆಯಾಗಲೋ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.