Monday, September 16, 2013

ಮಾತ್ಗವಿತೆ-145

ತರಚಿ ಗಾಯ ಮಾಡಿದ್ದು ನೀನು
ಮರೆಸಿ ಕೂಡಿದವ ನಾನು !
ಹೊರಳಾಟದ ಪರಸಂಗದಲ್ಲಿ
ನೆರೆದ ಕೂದಲುಗಳ ಮುಲುಕಾಟವೂ ಇತ್ತು
ಸರಿದ ನೆನಪುಗಳ ಬುತ್ತಿಯೂ ಇತ್ತು !
ನೀನು ಅವಳಲ್ಲ ; ಅವಳಂತೆಯೇ ಇರುವೆ ;
ನಾನು ನಾನಲ್ಲ, ನನ್ನಂತೆಯೇ ಇರಬೇಕು ಎಂದುಕೊಂಡವ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.