Friday, September 20, 2013

ಮಾತ್ಗವಿತೆ-147

ಮೊನ್ನೆ ಮೊನ್ನೆಯೇ ಹುಡುಯಾಗಿದ್ದಾಳಾಕೆ
ಈಗ ನೋಡಿದರೆ ಪರಿಪೂರ್ಣ ತಾಯಿತನ !
ಆಕೆಯ ಮಾತುಗಳಲ್ಲಿ ಗಂಭೀರತೆ ;
ನಗುವಿನ ಮುಖವಾಡ ; ಮಾಡಬಾರದ ಪಾತ್ರ !
ಸುಖದ ಪರಿಕಲ್ಪನೆ ಎಂದರೆ ಇದೇ ಏನು ?
ಅರಿವು ಇರುವ ಯಾರಿಗಾದರೂ ಕಾಣಿಸೋದಿಲ್ಲವೇ
ಕಣ್ಣುಗಳಲ್ಲಿ ಮಾಯದ ಗಾಯದ ಕಲೆ  ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.