Wednesday, February 01, 2012

ನಮಗೂ ಮೀಸಲಾತಿ ಕೊಡಿ ಎಂದ ಹರ್ಯಾಣದ ಬ್ರಾಹ್ಮಣರು !

ಭಿವಾನಿ, ಹರ್ಯಾಣ, ಫೆ.1: ಸರ್ಕಾರಿ ಹುದ್ದೆಗಳಲ್ಲಿ ನಮಗೂ ಮೀಸಲಾತಿ ನೀಡಬೇಕು ಎಂದು ಬ್ರಾಹ್ಮಣ ಸಮುದಾಯದವರು ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರವನ್ನು ಆಗ್ರಹಿಸಿದ ಘಟನೆ ನಡೆದಿದೆ.

ಹಲವು ವರ್ಷಗಳಿಂದ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸುವಂತೆ ಮನವಿ ಸಲ್ಲಿಸಲಾಗಿದೆ. ಅದರೆ, ಸರ್ಕಾರ ಮಾತ್ರ ಮೀಸಲಾತಿ ಕಲ್ಪಿಸಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ತೀವ್ರವಾದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಬ್ರಾಹ್ಮಣ ಆರಕ್ಷಣ್ ಸಂಘರ್ಷ ಸಮಿತಿ ವಕ್ತಾರ ಉಮೇಶ್ ಶರ್ಮ ಹೇಳಿದ್ದಾರೆ.

ಬ್ರಾಹ್ಮಣ ಏಕತಾ ಸಮಾವೇಶದಲ್ಲಿ ಮಾತನಾಡಿದ ಉಮೇಶ್, ಹರ್ಯಾಣದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಶೇ.23 ರಷ್ಟು ಮಂದಿ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಸರ್ಕಾರಿ ಸೌಲಭ್ಯ ಪಡೆಯಲು ಎಲ್ಲಾ ರೀತಿ ಅರ್ಹರಾಗಿದ್ದಾರೆ ಎಂದು ಹೇಳಿದರು.

ಜಾತ್ ಪಂಚಾಯತಿಯಲ್ಲೂ ಈ ಬಗ್ಗೆ ಸಹಮತವಿದೆ ಆದರೆ, ಸರ್ಕಾರ ಮಾತ್ರ ನಿರ್ಲಕ್ಷ್ಯ ತೋರುತ್ತಿದೆ. ಫೆ.26ರಂದು ಮೀಸಲಾತಿಗೆ ಆಗ್ರಹಿಸಿ ಮನವಿಯನ್ನು ರಾಜ್ಯಪಾಲರಿಗೆ ಸಲ್ಲಿಸುತ್ತೇವೆ. ಸರ್ಕಾರ ಯಾವುದೇ ಉತ್ತರ ನೀಡದಿದ್ದರೆ, ಜಂತರ್ ಮಂತರ್ ನಲ್ಲಿ ಧರಣಿ ಕೂತು, ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುತ್ತೇವೆ ಎಂದು ಸಮಿತಿಯ ಅಧ್ಯಕ್ಷ ಪಂಡಿತ್ ಹರಿ ರಾಮ್ ದೀಕ್ಷಿತ್ ಹೇಳಿದ್ದಾರೆ.

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.