Wednesday, August 14, 2013

ಮಾತ್ಗವಿತೆ-140

ಹೊಳೆಯ ದಡದಲಿ ನಿಂತು ಹೊಳೆಯುತಿರುವ
ಹೊಸ ಬೆಳಕಿನ ತಾರೆಗೆ ಕೈ ಮಾಡಲೇ ?
ಹಳೆಯ  ನೆನಪುಗಳ ಬಿಸಿಲ ಬೆಳಕವನು
ಜಳಕ ಮಾಡಿ ತೆಗೆದು ಒಗೆಯಲೇ ?
ಮೆತ್ತಿಕೊಂಡ ಮರುಳತನವನೇ ಹರಿದು ಒಗೆಯಲೇ ?
ಚಿತ್ತಕ್ಕೆ ಚಿತ್ತಾರಗಳು ಹಲವು ; ಮತ್ತೇ
ಕೂಟಕ್ಕೆ ಬರೀ ಕತ್ತಲು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.