Friday, August 24, 2012

ನಸುಕಿನ ಕಿರಣಗಳ ಕನಸ ಬಸುರಿನ ಮುಲುಕು !

 
 ಬಸವರಾಜ ಸುಳೇಭಾವಿ
ಅದು ನಿನ್ನ ಹೆಸರಾಗಿರಲಿ
ಅಥವಾ ಒಂದು ಪ್ರೇಮ ಪತ್ರ
ಹಾಗೆಯೇ ಮನಸ ಭಿತ್ತಿಯಲಿ
ಮೂಡಿದ ನಿನ್ನ ಚಿತ್ರ ಅಥವಾ
ಎದೆಯಿಂದ ಜಾರಿಬಿದ್ದ
ಈ ಪದ್ಯದ ಸಾಲು
ಎಲ್ಲವನು ನಾನು
ಬೆಳಕಿನ ಧ್ಯಾನದ
ನಸುಕಿನ ಕಿರಣಗಳಿಂದ
ಕನಸ ಬಸುರಿನ ಮುಲುಕುಗಳಿಂದ
ಹೋರಾಟದ ನಿಶಾನೆ ಹಿಡಿದ ಕೈಗಳ
ವಸಂತದ ಹಂಬಲಗಳಿಂದ
ಬರೆದಿರುವೆ
ಒಂದು ದಿನ ಎಲ್ಲವೂ ಅಳುಕಬಹುದು
ಆದರೆ ನಿನ್ನಾಣೆ
ಬದುಕಿನ ಮೈಲುಗಲ್ಲ ಮೇಲೆ
ಹೃದಯವೇ ಬಾಯಿಗೆ ಬಂದು
ಆಡಿದ ಮಾತು ಹಾಗೇ ಉಳಿಯಲಿದೆ
ಈ ಭೂಮಿಯಂತೆ ಆ ಆಕಾಶದಂತೆ
ಮತ್ತು ಹೂ ಉದುರಿಬಿದ್ದ ಮೇಲೂ
ಉಳಿವ ಬೀಜದಂತೆ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.